Naanu Neenu Ondada (From "Naa Ninna Bidalaare")

Naanu Neenu Ondada (From "Naa Ninna Bidalaare") Lyrics

Romantic Duets Of S.P.B. And Janaki  by S.P. Balasubrahmanyam, S. Janaki

Song  ·  502,068 Plays  ·  4:28  ·  Kannada

Saregama

Naanu Neenu Ondada (From "Naa Ninna Bidalaare") Lyrics

ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೇ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇ

ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೇ ನೋಡುವೆ
ಕಣ್ಣಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲ್ಲೂ ನೀ ಕಾಣುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೇ ನೋಡುವೆ

ನನಗಾಗಿ ಹೆಣ್ಣಾಗಿ ಬಂದೆ
ನನ್ನಲ್ಲಿ ನಿನ್ನಾಸೆ ತಂದೆ
ಹಗಲಿಲ್ಲ ಇರುಳಿಲ್ಲ ನಿನ್ನಲ್ಲೇ ಮನವೆಲ್ಲ
ನೆನಪಲ್ಲೇ ನಾ ಸೋತು ಹೋದೆ
ಸಂಗಾತಿ ನೀನಾಗಿ ಬಂದೆ
ಸಂತೋಷ ಬಾಳಲ್ಲಿ ತಂದೆ
ಹಗಲಲ್ಲಿ ಇರುಳಲ್ಲಿ ಮನವೆಲ್ಲ ನಿನ್ನಲ್ಲಿ
ನೆನಪಿಂದ ನಾ ನೊಂದು ಹೋದೆ
ಇನ್ನೆಂದು ಈ ಚಿಂತೆ ನಿನಗಿಲ್ಲವೆ

ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ
ಮುತ್ತಲ್ಲೇ ನಿನ್ನ ಸಿಂಗಾರ ಮಾಡಿ
ಕಣ್ತುಂಬ ನಾ ನೋಡುವೇ
ನಾನು ನೀನು ಒಂದಾದ ಮೇಲೆ
ಹೀಗೇಕೆ ನೀ ದೂರ ಹೋಗುವೆ

ಲತೆಯಲ್ಲಿ ಹೂವಾಗಿ ನಾನು
ಮರಿದುಂಬಿ ಅಂದಾಗಿ ನೀನು
ಹೂವಲ್ಲಿ ಹೊರಳಾಡಿ ಜೇನಾಟ ನಾವಾಡಿ
ಆನಂದ ಹೊಂದೋಣವೇನು
ಬಾನಾಡಿ ನಾವಾಗಿ ಹಾರಿ
ಬಾನಲ್ಲಿ ಒಂದಾಗಿ ಸೇರಿ
ಹೊಸ ಆಟ ಆಡೋಣ
ಹೊಸ ನೋಟ ನೋಡೋಣ
ಮುಗಿಲಿಂದ ಜಾರೋಣವೇನು
ಎಂದೆಂದೂ ನೆರಳಾಗಿ ನಾ ಬಾಳುವೆ

ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೇ ನೋಡುವೆ
ಕಣ್ಣಲ್ಲೂ ನೀನೇ ಮನದಲ್ಲೂ ನೀನೇ
ಎಲ್ಲೆಲ್ಲೂ ನೀ ಕಾಣುವೇ

ನಾನು ನೀನು ಒಂದಾದ ಮೇಲೆ
ಹೀಗೇಕೆ ನನ್ನನ್ನೇ ನೋಡುವೆ
ಹೀಗೇಕೆ ನನ್ನನ್ನೇ ನೋಡುವೆ

Writer(s): Rajan Nagendra, Chi Udayashanker<br>Lyrics powered by www.musixmatch.com


More from Romantic Duets Of S.P.B. And Janaki

Loading

You Might Like

Loading


4m 28s  ·  Kannada

Saregama

FAQs for Naanu Neenu Ondada (From "Naa Ninna Bidalaare")