Jeeva Veene

Jeeva Veene Lyrics

Navarasam  by Rajan Nagendra, S.P. Balasubrahmanyam, S. Janaki

Song  ·  1,775 Plays  ·  4:36  ·  Kannada

© 1999 Saregama

Jeeva Veene Lyrics

ಜೀವ ವೀಣೆ ನೀಡು ಮಿಡಿತದ ಸಂಗೀತ
ಓ... ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಇಂದು ಮಿಲನದ ಸಂತೋಷ ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು...

ಜೀವ ವೀಣೆ ನೀಡು ಮಿಡಿತದ ಸಂಗೀತ
ಓ... ಭಾವ ಗೀತೆ ಬಾಳಿನೊಲುಮೆಯ ಸಂಕೇತ

ಮಿಡಿಯುವ ಮನಗಳು ಎರಡು ಮಿಡಿತದ ರಾಗವು ಒಂದೆ
ಮಿಂಚುವ ಕಣ್ಣಂಚಿನ ಸಂಚು ಇಂದು ಒಂದೇ
ಆ... ಲಲಲ... ಆ...
ತಪಿಸುವ ಹೃದಯಗಳೆರಡು ತಾಪದ ವೇಗವು ಒಂದೆ
ಸೇರುವ ಶುಭ ಸಮಯದಿ ವಿರಹ ಇರದು ಮುಂದೆ...

ಓ... ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಜೀವ ವೀಣೆ ನೀಡು ಮಿಡಿತದ ಸಂಗೀತ

ಒಲವಿನ ಬಯಕೆಯು ಅಂದು ಮಿಲನ ಮಹೋತ್ಸವವಿಂದು
ರಚಿಸುವ ನಾವನುದಿನ ಮುದದ ಪ್ರೇಮ ಕವನ...
ಕನಸಿನ ರಾತ್ರಿಯು ಕಳೆದು ಬಂದಿರೆ ನೆನೆಸಿದ ಹಗಲು
ಕಾಣುವ ಹೊಂಬಿಸಿಲಿನ ಸುಖದ ಸೂರ್ಯ ಕಿರಣ...

ಓ... ಭಾವ ಗೀತೆ ಬಾಳಿನೊಲುಮೆಯ ಸಂಕೇತ
ಜೀವ ವೀಣೆ ನೀಡು ಮಿಡಿತದ ಸಂಗೀತ
ಇಂದು ಮಿಲನದ ಸಂತೋಷ ಸುಖ ಸಂತೋಷ
ಶುಭ ಸಂದೇಶ ಸಂದೇಶ ಸಂದೇಶವು...

ಜೀವ ವೀಣೆ ನೀಡು ಮಿಡಿತದ ಸಂಗೀತ
ಓ... ಭಾವ ಗೀತೆ ಬಾಳಿನೊಲುಮೆಯ ಸಂಕೇತ

Writer(s): Rajan Nagendra, Geethapriya<br>Lyrics powered by www.musixmatch.com


More from Navarasam

Loading

You Might Like

Loading


4m 36s  ·  Kannada

© 1999 Saregama

FAQs for Jeeva Veene