Nee Bandu Ninthaaga (From "Kasturi Nivasa") Lyrics - Pioneers Of Kannada Cinema - Only on JioSaavn
What kind of music do you
want to listen to?

You have 5 of 5 Songs left.

Listen with no limits on the JioSaavn app.

I Have JioSaavn
 1. Nee Bandu Ninthaaga (From "Kasturi Nivasa")

  Pioneers Of Kannada Cinema

  3:30

  {"url":"ID2ieOjCrwfgWvL5sXl4B1ImC5QfbsDyVjgt31sR+pN9IAq+LXelGK9PTLiHcH8r7qo1CvyN7WMrFrrxTblR4hw7tS9a8Gtq","pid":"2tA7cI0Q","length":"210"}
 2. Nee Bandu Ninthaaga (From "Kasturi Nivasa") Song Lyrics

  ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ ನೀ ಬಂದು
  ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ || ವಾಸಂತಿ ನಲಿದಾಗ
  ವಾಸಂತಿ ನಲಿದಾಗ ಹಸಿರುಟ್ಟು ನಗುವಾಗ ವನದೇವಿ ಅಡಿಮೇಲೆ ಅಡಿ ಇಟ್ಟು ಬರುವಾಗ
  ಮುಗಿಲೊಂದು ಕರೆದಾಗ ನವಿಲೊಂದು ಮೆರೆದಾಗ ಒಡಲಲ್ಲಿ ಹೊಸದೊಂದು ನವಜೀವ
  ಬಂದಾಗ ಕೈ ಕೈ ಸೋತಾಗ ಮನವೆರೆಡು ಬೆರೆತಾಗ ಮಿಡಿದಂಥ ಹೊಸರಾಗ ಅದುವೇ ಅನುರಾಗ ...
  ಬಾರಾ ।।೧।। ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ
  ಜೇನಂಥ ಮಾತಲ್ಲಿ ಜೇನಂಥ ಮಾತಲ್ಲಿ ಕುಡಿಗಣ್ಣ ಸಂಚಲ್ಲಿ ನಗುವೆಂಬ ಹೂಚೆಲ್ಲಿ ನಿಂತೆನೀ
  ಮನದಲ್ಲಿ ಎದುರಾದೆ ಹಗಲಲ್ಲಿ ಮರೆಯಾದೆ ಇರುಳಲ್ಲಿ ನೀ ತಂದ ನೋವಿಗೆ ಕೊನೆಯೆಲ್ಲಿ
  ಮೊದಲೆಲ್ಲಿ ಬಲುದೂರ ನೀ ಹೋಗೆ ನಾ ತಾಳೆ ಈ ಬೆಗೆ ಬಾ ಬಾರೆ ಚೆಲುವೆ ಬಾರೆ ಒಲವೆ...
  ಬಾರಾ ।।೨।। ಬಾಳೆಂಬ ಪಥದಲ್ಲಿ ಬಾಳೆಂಬ ಪಥದಲ್ಲಿ ಒಲವೆಂಬ ರಥದಲ್ಲಿ ಕನಸೆಲ್ಲ
  ನನಸಾಗಿ ನನಸೆಲ್ಲಾ ಸೊಗಸಾಗಿ ಯುಗವೊಂದು ದಿನವಾಗಿ ದಿನವೊಂದು ಚಣವಾಗಿ ನಮ್ಮಾಸೆ
  ಹೂವಾಗಿ ಇಂಪಾದ ಹಾಡಾಗಿ ಕಹಿಯಲ್ಲಿ ಸಿಹಿಯಲ್ಲಿ
  ಮಳೆಯಲ್ಲಿ ಬಿಸಿಲಲ್ಲಿ ಯಂದೆಂದೂ ಜೊತೆಯಾಗಿ ನಡೆವಾ ಒಂದಾಗಿ.
  ಬಾರಾ ।।೩।। ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ

  Writer(s): R.N. JAYAGOPAL, G K VENKATESH
  Lyrics powered by www.musixmatch.com

  Artists

  1. P. B. Sreenivas

   Singer

  2. P. Susheela

   Singer

  3. G. K. Venkatesh

   Music Director

  4. R.N. Jayagopal

   Lyricist