Baanali Badalago

Baanali Badalago Lyrics

Simple Aag Ond Love Story  by Sonu Nigam

Song  ·  2,829,206 Plays  ·  4:58  ·  Kannada

© 2013 Mars Films / Jhankar Music

Baanali Badalago Lyrics

ಏರುಪೇರಾಯ್ತು ನೆಟ್ಟಗಿದ್ದ ನನ್ನ ಹೃದಯ
ಇಲ್ಲಿಂದ ಪ್ರೀತಿ ವ್ಯವಸಾಯ

ಬಾನಲಿ ಬದಲಾಗೋ ಬಣ್ಣವೇ ಭಾವನೆ
ಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂ ಬನದೀ, ನೆನಪೇ ಹೂವಾಯ್ತು
ಅದೇ ಮಾತು, ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ, ನಗೆ ಬಾಣ ಎದೆಯಲಿ ನಾಟಿದೆ

ಮನದಿ ಏನೋ ಹೊಸ ಗಲಭೆ ಶುರುವಾಗಿದೆ
ಮರೆತೆ ಏಕೆ ಬಳಿ ಬಂದು ಸರಿಮಾಡದೆ
ಗೆಳತಿ ನನ್ನ ಗೆಳತಿ, ತೆರೆದೆ ಮನದ ಕಿಟಕಿ
ಕರುಣಿಸು ಪ್ರೇಮ ಧಾರೆ, ಬಯಕೆಯ ತೋರದೆ
ಅದೇ ಮಾತು, ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ, ನಗೆ ಬಾಣ ಎದೆಯಲಿ ನಾಟಿದೆ

ಸರದಿಯಲ್ಲಿ ಹೊಸ ಬಯಕೆ ಸರಿದಾಡಿದೆ
ಹರಸಿ ಬೇಗ ಕರೆ ಮಾಡು ತಡಮಾಡದೆ
ಹುಡುಕಿ ನನ್ನ ಹುಡುಕಿ, ನಟಿಸು ಕಣ್ಣ ಮಿಟುಕಿ
ಗಮನಿಸು ಪ್ರೇಮ ಭಾಷೆ, ಪದಗಳು ನೋಡದೆ
ಅದೇ ಮಾತು, ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ, ನಗೆ ಬಾಣ ಎದೆಯಲಿ ನಾಟಿದೆ

ಬಾನಲಿ ಬದಲಾಗೋ ಬಣ್ಣವೇ ಭಾವನೆ
ಹೃದಯವು ಹಗುರಾಗಿ ಹಾರುವ ಸೂಚನೆ
ಮನದ ಹೂ ಬನದೀ, ನೆನಪೇ ಹೂವಾಯ್ತು
ಅದೇ ಮಾತು, ಅದೇ ನೋಟ ಮರೆಯದೆ ಕಾಡಿದೆ
ಅದೇ ಗಾನ, ನಗೆ ಬಾಣ ಎದೆಯಲಿ ನಾಟಿದೆ

Writer(s): Kodipura Siddu, B J Bharath<br>Lyrics powered by www.musixmatch.com


More from Simple Aag Ond Love Story

Loading

You Might Like

Loading


4m 58s  ·  Kannada

© 2013 Mars Films / Jhankar Music

FAQs for Baanali Badalago